Submission 699

ಮುತ್ತಿನಣತಿ

ರಚನೆ : ಶಂಕರ ಕುಲಕರ್ಣಿ

----------------------------------

ಭಾಳ ಚಂದ ಕಾಣಸ್ತೀ... ಥಕ ಥೖಯ್ಯ ಹಾಕಸ್ತೀ. ಕಣ್ಣ್ಸನ್ನೀ ನಿನ್ನ ವಯ್ಯಾರ. ಕಣ್ಣ್ಸನ್ನೀ ನಿನ್ನ ವಯ್ಯಾರ ಕುಣಿಸೇದ, ಕುಣಿಯೋಣು ಬಾರಾ ಕುಣಿಯೋಣು ಬಾ. ಕಣ್ಣ ಮ್ಯಾಲಿನ ರೆಪ್ಪಿ ಕಾಡೀಗಿ ಅದರೊಳಗಪ್ಪಿ ಹುಬ್ಬು ತೀಡಿದ್ದು ಅದನೊಪ್ಪಿ ಕನ್ನಡಿ ಯೂ ಹಿರಿ ಹಿರಿ ಹಿಗ್ಗೇದ ಕನ್ನಡಿಯೂ ಹಿಗ್ಗೇದ ನಿನ ಕಂಡ ಉರಸೋಣ ಬಾರಾ ಕುಣಿಯೋಣು ಬಾ. ಬಿಂಕದರಸಿಯ ಮಾಟ ಬಾಣ ಬಿಟ್ಟಂಗನ ನೋಟ ನಿನ್ನ ಸಿಂಗಾರ, ನಿನ್ನ ವಯ್ಯಾರ, ನೀ ನನ್ನ ಚೆಲುವಿನ ಚಿತ್ತಾರ ನೀ ಮಲ್ಲಿಗೆ, ನೀ ಸಂಪಿಗೆ ನೀ ಘಮ್ಮನೇ ಅಡರುವ ಮಂದಾರ ಕುಣಿಯೋಣು ಬಾ ಮನಸಾರ ಉರಸೋಣ ಬಾರಾ ಕುಣಿಯೋಣು ಬಾ.

----------------------------------

ನೋಂದಣಿ ಐಡಿ : KPF-S1-5303

0
Votes
145
Views
1 Year
Since posted

Finished since 501 days, 8 hours and 37 minutes.

Scroll to Top