Submission 745

ರಾಧೆ ರಾಗ.

ರಚನೆ : ಮೋಹನ್ .ಬಿ

----------------------------------

ನೀ ಕೊರಳೊಳಗೆ ದನಿಯ ನುಡಿಸುವ ನಾದಬ್ರಹ್ಮನು ನೀ ಕೊಳದೊಳಗೆ ಹನಿಯ ಹರಿಸುವ ಹರಿಹರನು ಭಾವಗಳ ಬೆರಳಿಂದ ಕೊರಳನ್ನು ಬಂಧಿಸು ದಾಹಗಳ ಅಧರದಿಂದ ನಯನಾನ ಚುಂಬಿಸು ಪರಿಚಯಕ್ಕೆ ಪ್ರಬಂಧವ ಓದಿದೆ ಅಂದು ಪರಿಣಯಕ್ಕೆ ಪ್ರಣಯವು ಕಾದಿದೆ ಇಂದು ನೀರಂತೆ ನೀ ನನ್ನ ಆವರಿಸು, ಮನದ ದಾಹ ತಂದಿಹೆನು ತೇರಂತೆ ನೀ ನನ್ನ ಸಾಗಿಸು, ತೀರಾ ದೂರದಿಂದ ಬಂದಿಹೆನು ಕವಿತೆಯಾಗುವೆ ನಿನ್ನೊಳಗಿನ ಕವಿಗೆ ಕೊರತೆಯಾಗುವೆ ನಾನಿರದ ಕ್ಷಣಗಳಿಗೆ ಇರುಳಲಿ ಕೂತು ಮರಳನ್ನು ಅಳೆಯುವ ಬೆರಳನ್ನು ಹಿಡಿದು ಕ್ಷಣಗಳ ಕಳೆಯುವ ಮನದ ಅಲೆಗಳು ಅಪ್ಪಳಿಸಿವೆ ನೀ ಅಪ್ಪಿಕೊಂಡಾಗ ರಕ್ತದ ಕಣಗಳು ಕುಪ್ಪಳಿಸಿವೆ ನೀ ಒಪ್ಪಿಕೊಂಡಾಗ

----------------------------------

ನೋಂದಣಿ ಐಡಿ : KPF-S1-5333

0
Votes
135
Views
1 Year
Since posted

Finished since 453 days, 13 hours and 52 minutes.

Scroll to Top