Submission 912

ಕನಸು

ರಚನೆ : ಮಾಲಾಶ್ರೀ ಹೆಚ್.ಎಮ್.

----------------------------------

ಕನಸೆಂದರೆ ಬರಿ ಭ್ರಮೆಯಲ್ಲ.. ನಮ್ಮಯ ಬಣ್ಣದ ಲೋಕ. ಹೊಸ ಪಥದ ನೋಟದ ಬೀಜ ಮೂಡಲ ಮಂಜಿನಲ್ಲಿ ಮಿಂಚುವ ಪ್ರೇಮ. ಕನಸೆಂದರೆ ದಿಗ್ಬಂಧನವಲ್ಲ.. ಹಾರುವ ಹಕ್ಕಿಯ ಅನಂತದ ಹೊನಲು. ಮೌನದಲ್ಲಿ ಹರಿದು ಬರುವ ನಮ್ಮಯ ಮಾತಿನ ಗೀತೆ. ಕನಸೆಂದರೆ ಸೀಮಿತತೆಯಲ್ಲ ಗುರಿ ಮುಟ್ಟುವ ಯಾನ. ಎಲ್ಲರ ನೆನಪುಗಳೊಂದಿಗೆ ಕಾಲ ಚೆಲ್ಲುವ ಕಥೆಗಳ ಹಾದಿ. ಕನಸಂದರೆ ಬರಿ ಸವಿಯಲ್ಲ ಕಹಿಯ ಹೊಸತು ಚಿಗುರು...

----------------------------------

ನೋಂದಣಿ ಐಡಿ : KPF-S1-5424

0
Votes
145
Views
1 Year
Since posted

Finished since 499 days, 23 hours and 15 minutes.

Scroll to Top