Submission 549

ನನ್ನ ಜೀವದ ಒಡತಿ

ರಚನೆ : ಶ್ರೀಲಕ್ಷ್ಮೀ ಮೊಖಾಸಿ

----------------------------------

ನನ್ನ ಜೀವದ ಒಡತಿ ನೀನು, ನನ್ನ ಜೀವನದ ಮೊದಲ ಗೆಳತಿ ನೀನು. ನನ್ನ ಹಿಂದೆ ನಿಂತು ನನಗೆ ಗುರಿ ತೋರಿದ ಗುರುವು ನೀನು, ನನ್ನ ಮುಂದೆ ನಿಂತು ನನಗೆ ದಾರಿ ತೋರಿದ ಸಾರಥಿಯೂ ನೀನು. ನನಗಾಗಿ ಹಲವಾರು ಹರಕೆ ಹೊತ್ತವಳು ನೀನು, ನನ್ನ ಖುಷಿಗಾಗಿ ಶ್ರಮ ಪಟ್ಟವಳು ನೀನು. ನನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟವಳು ನೀನು, ನನ್ನ ಈ ಜಗವನ್ನು ಸುಂದರವಾಗಿ ಕಟ್ಟಿ ಕೊಟ್ಟವಳು ನೀನು. ಅಮ್ಮ.. ನನ್ನ ಎಲ್ಲಾ ಕನಸುಗಳನ್ನು ಕೇಳದೆ ಈಡೇರಿಸಿದವಳು ನೀನು, ಈಗ ನಿನ್ನ ಕನಸುಗಳನ್ನು ಈಡೇರಿಸುವ ಕನಸು ಹೊತ್ತವಳು ನಾನು.

----------------------------------

ನೋಂದಣಿ ಐಡಿ : KPF-S1-5137

0
Votes
136
Views
1 Year
Since posted

Finished since 497 days, 22 hours and 52 minutes.

Scroll to Top