Submission 593

ನೀನು' ಎಂಬ ನಾನು

ರಚನೆ : ಪರಶುರಾಮ ಡಿ

----------------------------------

ಖಾಲಿ ರಸ್ತೆಯ ಪಯಣಿಗನಾಗಿರುವ 'ನೀನು', ಮಾತಾಡುವೆ ಯಾರೊಂದಿಗೆ ನೆನಪುಗಳ ಹೊರತಾಗಿ, ಇರದಾಗ ಯಾರು ಜೊತೆಯಲಿ ಎಡ-ಬಲವಾಗಿ ಕೇಳುವೆ ನೀ ಯಾರ ಧ್ವನಿ ನಿನ್ನುಸಿರ ಬದಲಾಗಿ. ಅಂತರಂಗವ ಹೆಚ್ಚಾಗಿ ಮೆಚ್ಚಿರುವ 'ನೀನು' ಮಾಡುವೆಯೇನು ಸೇರಿ ಬಹಿರಂಗ ಗಲಭೆಗಳನು ನಿನ್ನ ಭಾವ ಕಡಲಲೇ ಮುಳುಗಿರುವ 'ನೀನು' ಅರ್ಥವೇನು ಹುಡುಕಿ ಅದರ ಮೂಲಗಳನು ಸಾಗುತ್ತಿರು 'ನೀನು',ಆಗದೇ ಪರಿಶಾನು ಜೊತೆಯಾಗಿಸಿ ಪಯಣಕೆ ಮಿಂಚಿನ ನಗುವನ್ನು ಧ್ವನಿಯಾಗಿಸಿ ನೀ ಮಾಡಿದ ವಾದಗಳನ್ನು ಅರ್ಥೈಸಿ ಜೀವನಯಾನದ ಪ್ರಯಣವನು.

----------------------------------

ನೋಂದಣಿ ಐಡಿ : KPF-S1-5177

0
Votes
121
Views
1 Year
Since posted

Finished since 452 days, 12 hours and 34 minutes.

Scroll to Top