Submission 669

ಅವ್ವ

ರಚನೆ : ಪ್ರತುಮ್ ಸಾಗರ್

----------------------------------

ಅವ್ವ, ನೀ ಊದಿದು ಒಲೆಯಲ್ಲಿದ್ದ ಬಡತನದ ಬೂದಿಯ ಬದುಕಿಗೆ ಬೆಳಕಾದ ಉರಿ ಕೆಂಡವಾ ನೀ ಇಂಗಿಸಿದ್ದು ಬೇಯಿಸಿದ್ದು ಗಂಜಿಯ ನೀರಲ್ಲ ಒಪ್ಪತ್ತಿನ ಕೂಳು ಅನ್ನದ ಅಗಳು ಹೊಗೆಯಾಗಿ ಮೋಡವಾಗಿ ಆವರಿಸಿದ್ದು ಮಳೆ ಮೋಡದ ಹನಿಯಾಗಲು ಬಡವನ ಕಣ್ಣೀರ ಮರೆಮಾಚಾಲು ಕಂಕಳಲಿ ಕೂಸು ಕೈಯಲಿ ಬೂರನಿಗೆ ಕಣ್ಣಂಚಲಿ ಬದುಕು ತುಂಬಿದ ಪುಟ್ಟೇ ಇಡೀ ಜೀವನವೆಲ್ಲ ಬಡವರ ಬದುಕು ಮೂರಬಟ್ಟೆ

----------------------------------

ನೋಂದಣಿ ಐಡಿ : KPF-S1-5284

0
Votes
150
Views
1 Year
Since posted

Finished since 543 days, 4 hours and 28 minutes.

Scroll to Top