Submission 735

ಹೆಣ್ಣು ಹೆಣ್ಣೆಂದು ಹೀಯಾಳಿಸಬೇಡ

ರಚನೆ : ಶಿವಾನಂದ ನಾಯಿಕ

----------------------------------

ಹೆಣ್ಣು ಹೆಣ್ಣೆಂದು ಹೀಯಾಳಿಸಬೇಡ ಅವಳೊಂದು ಮಹಾಶಕ್ತಿ ನೋಡ ! ನರ ನಾರಾಯಣರಿಗೂ ಹಾಲುನಿಸಿ ಸುರ ಅಸುರರನೂ ಎತ್ತಾಡಿಸಿ ದೃಷ್ಟಿಯ ನೀಡಿದವಳು ಸೃಷ್ಟಿಯ ಮೂಲ ಅವಳು ಹೆಜ್ಜೆ ಹೆಜ್ಜೆಗೂ ದಾರಿದೀಪದಂತೆ ಬರುವಳು ತಿದ್ದಿತೀಡಿ ಗುರಿಯೆಡೆಗೆ ಕರೆದೊಯ್ಯುವಳು ಶಿಲ್ಪ, ಶಿಲ್ಪಿಯಾಗಿ ನಗುವ ಜೀವ ರಮ್ಯ ಸೌಮ್ಯ ಎರಡು ಸ್ವಭಾವ ಗಂಡು ಜನ್ಮಕೆ ಸ್ಫೂರ್ತಿಯಾದವಳು ಯಾವ ತೆಗಳಿಕೆಗಳಿಗೂ ಕುಗ್ಗದವಳು ಹೆಣ್ಣು ಹೆಣ್ಣೆಂದು ಹೀಯಾಳಿಸಬೇಡ ಅವಳೊಂದು ಮಹಾಶಕ್ತಿ ನೋಡ !

----------------------------------

ನೋಂದಣಿ ಐಡಿ : KPF-S1-5326

0
Votes
143
Views
1 Year
Since posted

Finished since 452 days, 11 hours and 34 minutes.

Scroll to Top